ವೈಷ್ಣವಿ ಗೌಡ ಒಬ್ಬ ಭಾರತೀಯ ಮೂಲದ ಕಿರುತೆರೆ ಮತ್ತು ಚಲನಚಿತ್ರ ನಟಿ ಆಗಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಅಗ್ನಿಸಾಕ್ಷಿ ಧಾರಾವಾಹಿ ಮೂಲಕ ಖ್ಯಾತಿಗಳಿಸಿದ್ದರು. ಇವರು ಬಿಗ್ ಬಾಸ್ ಕನ್ನಡ (ಸೀಸನ್ 8)ರ ಟಾಪ್- 4 ಸ್ಪರ್ಧಿಗಳಲ್ಲಿ ಒಬ್ಬರು ಆಗಿದ್ದರು. ಪ್ರಸ್ತುತ ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಸೀತಾ ರಾಮದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. == ವೈಯಕ್ತಿಕ ಜೀವನ == ವೈಷ್ಣವಿ ಗೌಡ ಇವರು ಫೆಬ್ರವರಿ 20, 1995 ರಂದು ಬೆಂಗಳೂರಿನಲ್ಲಿ ಜನಿಸಿದರು. ಇವರ ತಂದೆ ರವಿಕುಮಾರ್ ಗೌಡ ಮತ್ತು ತಾಯಿ ಭಾನು ಗೌಡ ಆಗಿದ್ದಾರೆ. ಇವರಿಗೆ ಸುನೀಲ್ ಕುಮಾರ್ ಎಂಬ ಸಹೋದರನಿದ್ದಾನೆ. ಕನ್ನಡ ಚಲನಚಿತ್ರ ನಟಿ ಅಮೂಲ್ಯ ಇವರ ಉತ್ತಮ ಸ್ನೇಹಿತೆ ಆಗಿದ್ದಾರೆ. === ಶಿಕ್ಷಣ ಮತ್ತು ವೃತ್ತಿ ಜೀವನ === ಇವರು ಬೆಂಗಳೂರಿನ ಜಯನಗರದ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಪದವಿಪೂರ್ವವನ್ನು ಪೂರ್ಣಗೊಳಿಸಿದರು. ಆದರೆ ಹಾಜರಿ ಕೊರತೆಯಿಂದ ಪದವಿ ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಿದ್ದರು. ನಂತರ, ಬೆಂಗಳೂರು ವಿಶ್ವವಿದ್ಯಾಲಯದಿಂದ ದೂರಶಿಕ್ಷಣದ ಮೂಲಕ ಬಿಎಯಲ್ಲಿ ಪದವಿಯನ್ನು ಪಡೆದುಕೊಂಡರು. ಇವರು ಭರತನಾಟ್ಯ, ಕುಚುಪುಡಿ ಮತ್ತು ಮೂರನೇ ಹಂತದ ಬೆಲ್ಲಿ ಡ್ಯಾನ್ಸ್ನಲ್ಲಿ ತರಬೇತಿ ಪಡೆದು ಕೊಂಡಿದ್ದಾರೆ. ೨೦೧೧ರಲ್ಲಿ ಝೀ ಕನ್ನಡದಲ್ಲಿ ಪ್ರಸಾರವಾದ ದೇವಿ ಧಾರಾವಾಹಿಯ ಮೂಲಕ ತಮ್ಮ ಹದಿನಾರನೇ ವಯಸ್ಸಿನಲ್ಲಿ ಕಿರುತೆರೆಯನ್ನು ಪ್ರವೇಶಿಸಿದರು. ವೈಷ್ಣವಿ ಗೌಡ ಅವರು ಅದರಲ್ಲಿನ ದೇವಿ ಪಾತ್ರ ಮತ್ತು ೨೦೧೩ರಲ್ಲಿ ಕಲರ್ಸ್ ಕನ್ನಡದಲ್ಲಿ ಪ್ರಸಾರವಾದ ಅಗ್ನಿಸಾಕ್ಷಿ ಧಾರಾವಾಹಿಯ ಸನ್ನಿಧಿ ಪಾತ್ರದ ಮೂಲಕ ಪ್ರಸಿದ್ಧರಾದರು. ಇವರು ೨೦೧೭ರಲ್ಲಿ ಭರ್ಜರಿ ಕಾಮಿಡಿ ಶೋನಲ್ಲಿ ನಿರೂಪಕರಾಗಿದ್ದರು. === ಅಗ್ನಿಸಾಕ್ಷಿ === ಡಿಸೆಂಬರ್ ೨, ೨೦೧೩ರಲ್ಲಿ ತೆರೆ ಕಂಡ ಅಗ್ನಿಸಾಕ್ಷಿ ಧಾರಾವಾಹಿಯು ೧೫೮೬ ಎಪಿಸೋಡುಗಳು ಕಾಲ ಪ್ರಸಾರವಾಗಿತ್ತು. ೬ ವರ್ಷಗಳ ಕಾಲ ಕಲರ್ಸ್ ಕನ್ನಡವಾಹಿನಿಯಲ್ಲಿ ಪ್ರಸಾರವಾದ ಈ ಧಾರಾವಾಹಿಯು ೧೯.೭ ರಷ್ಟು ಟಿ.ಆರ್.ಪಿ ಹೊಂದಿತ್ತು. ಇದು ಈಗಲೂ ಕನ್ನಡ ಧಾರಾವಾಹಿಗಳ ಮಟ್ಟಿಗಿನ ಗರಿಷ್ಟ ಟಿ.ಆರ್.ಪಿ ಆಗಿದೆ. == ಚಲನಚಿತ್ರಗಳು == == ದೂರದರ್ಶನ == === ಧಾರಾವಾಹಿಗಳು === === ರಿಯಾಲಿಟಿ ಶೋಗಳು === == ಪ್ರಶಸ್ತಿಗಳು == == ಟಿಪ್ಪಣಿಗಳು == ವೈಷ್ಣವಿ ಮತ್ತು ಬಿಗ್ ಬಾಸ್ ಎಂಟು ^ಟಿಪ್ಪಣಿ 1 : ವೈಷ್ಣವಿ ಅವರು ಕನ್ನಡದ ಕಲರ್ಸ್ ಕನ್ನಡ ವಾಹಿನಿಯ ಬಿಗ್ ಬಾಸ್ ರಿಯಾಲಿಟಿ ಶೋನ ಎಂಟನೇ ಅವತರಣಿಕೆಯಲ್ಲಿ ಭಾಗವಹಿಸಿದ್ದರು. ಇದರಲ್ಲಿ ಯಾರ ವಿರೋಧವನ್ನೂ ಕಟ್ಟಿಕೊಳ್ಳದೇ, ಬೈಯೋದನ್ನೂ ನಗುನಗುತ್ತಲೇ ಬಯ್ಯುತ್ತಿದ್ದ ಇವರು ರೇಷ್ಮೆ ಸೀರೆ ಎಂದು ಪ್ರಖ್ಯಾತರಾಗಿದ್ದರು. ಇವರು ಇದರ ಟಾಪ್-೪ ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದರು. == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == ವೈಷ್ಣವಿ ಗೌಡ ಐ ಎಮ್ ಡಿ ಬಿನಲ್ಲಿ